ಪುಟ ಐದು: ನಟನೆಯ ಮೊದಲ ರುಚಿ
- Aakarsha
- Jun 8, 2022
- 1 min read
Updated: Jun 9, 2022

ನಾಟಕ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು! ಆದರೆ ರೀತಿ ನೀತಿಗಳ ಪರಿಚಯವಿರಲಿಲ್ಲ.
ನಾನು ತಂಡವನ್ನು ಪ್ರವೇಶಿಸಿದಾಗ, 'ರಕ್ತ-ಧ್ವಜ' ನಾಟಕ, ನಿರ್ಮಾಣದ ಕೊನೆಯ ಹಂತದಲ್ಲಿತ್ತು. ಮೇಡಂ, ಒಂದೆರಡು ಡೈಲಾಗು, ನರ್ರೇಷನ್ ಕೊಟ್ಟು ನಾಟಕದೊಳಗೆ ಸೇರಿಸಿಯೇ ಬಿಟ್ಟರು. ನಟನೆಯ ಗಂಧ ಗಾಳಿ ಅರಿಯದೆ, ಬಿರುಸು ಬಿಗುಮಾನದಿಂದ ಮನಸ್ಸಿಗೆ ಬಂದ ಹಾಗೆ ಡೈಲಾಗ್ ಗಳನ್ನು ಒದರಿದ್ದೆ.
ಮೊದಲ ಶೋ ಆದ ಮೇಲೆ ನಿಧಾನವಾಗಿ ನಾಟಕ ಅರ್ಥವಾಗುತ್ತಿತ್ತು. ಆದರೆ ರಕ್ತ ಧ್ವಜದ ಮೇಲೆ ಇನ್ನೂ ನಂಬಿಕೆ ಹುಟ್ಟಿರಲಿಲ್ಲ. ಸಬ್ಜೆಕ್ಟ್ ತುಂಬಾ old, ಹೊಸತೇನೂ ಇಲ್ಲ. ಇದನ್ನು ಜನ ನೋಡ್ತಾರ? ಅಂತೆಲ್ಲಾ ಡೌಟ್ಸ್ ಇತ್ತು. ಏನೋ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮಾಡುತ್ತಿದ್ದಾರೆ ಎನ್ನುವ ಸಣ್ಣ ಅಸಡ್ಡೆ.
ನಾಟಕದ ಎರಡು ಮೂರು ಶೋ ಆಗುವ ಹೊತ್ತಿಗೆ, teammates ಜೊತೆಗೆ ಮಾತನಾಡುತ್ತ ಅಲ್ಪ ಸ್ವಲ್ಪ ವಿವರಗಳನ್ನು ತಿಳಿಯುತ್ತಾ, ಹೊಸ ವಿಚಾರಗಳನ್ನು research ಮಾಡಿ ತಿಳಿಯುತ್ತಾ, ನಾಟಕದ ಬಗೆಗಿನ ನನ್ನ ನಿಲುವೇ ಬದಲಾಗಿತ್ತು.
ದೇಹದಲ್ಲಿ ಒಂದು ಹೊಸ ಎನರ್ಜಿ, ಹುರುಪು, ಕಿಚ್ಚು ಹುಟ್ಟಿತ್ತು. ನಾನು ಅಭಿನಯವನ್ನು enjoy ಮಾಡಲು ಶುರು ಮಾಡಿದ್ದೆ. ಕೆಂಚೇಗೌಡ - ಪೊಲೀಸ್ ಪಾತ್ರಧಾರಿ ಎದುರಿಗೆ ನಿಂತು ಕಣಲ್ಲಿ ಕಣ್ಣಿಟ್ಟು ಉಗ್ರವಾಗಿ ದಿಟ್ಟಿಸುವಾಗ, ಸ್ವತಂತ್ರ ಹೋರಾಟಗಾರನ ಪಾತ್ರ ಮಾಡುವ ನನ್ನ ದೇಹ ಮನಸಿನಲ್ಲಿ ಆಗುವ ಎನರ್ಜಿ shifts and changes ಅನ್ನು ಅನುಭವಿಸಿದ್ದು, ನಾನು ಕಂಡುಕೊಂಡ ನಟನೆಯ ಮೊದಲ ಸವಿರುಚಿ!

ಈಸೂರು ಎಂಬ ಒಂದು ಪುಟ್ಟ ಹಳ್ಳಿಯನ್ನು ದೈತ್ಯ ಬ್ರಿಟಿಷ್
ಸಾಮ್ರಾಜ್ಯದ ಎದುರು "ಸ್ವತಂತ್ರ" ಎಂದು ಘೋಷಿಸಿ. "ಏಸೂರು ಕೊಟ್ಟರೂ ಈಸೂರು ಕೊಡೆವು" ಎಂಬ ನಿಲುವಿಗಾಗಿ ಹೋರಾಡಿ ಮಡಿದ ಚಿರಂಜೀವಿಗಳನ್ನು ನೆನೆಸಿಕೊಂಡರೆ, ದೇಹದಲೊಮ್ಮೆ ವಿದ್ಯುತ್ ಸಂಚಾರವಾಗುವುದಂತು ನಿಜ!
ಈಗ ಎದೆಯುಬ್ಬಿಸಿ ಹೇಳುತ್ತೇನೆ, 'ರಕ್ತ-ಧ್ವಜ' ಎಲ್ಲರೂ ನೋಡಬೇಕಾದ ನಾಟಕ!
- Akarsha, Dhrushya(R).
__01_edited_edited.png)




👏✨