google788439879b616bdb.html
top of page

ಪ್ರಸಂಗ 14: " ದೇವರುಗಳನ್ನು ನಂಬದ ನನಗೆ ದೇವಸ್ಥಾನದಂತೆ ಕಂಡಿದ್ದು ಆ ತಾಲಿಮು ಜಾಗ. "

ನನ್ನೊಳಗಿದ್ದ ಕಲಾವಿದನ ಹುಚ್ಚು ಹೆಚ್ಚಾಗಿ ನೆತ್ತಿಗೇರಿದಾಗ " ಹೌದು ನಾನು ಕಲಾವಿದನಾಗಬೆಕು ಸಿನಿಮಾ ಸ್ಟಾರ್ ಆಗಬೇಕೆಂದು" ನಿರ್ಧರಿಸಿ ನಾನು ಒದುತಿದ್ದ CA ಹಾಗು ಮಾಡುತ್ತಿದ್ದ ಕೆಲಸವೆಂಬ ಚಪ್ಪಲಿಯನ್ನು ಬಿಟ್ಟು ಬರಿಗಾಲಿನಲ್ಲಿ ಕಲಾವಿದನಾಗುವ, ಸ್ಟಾರ್ ಆಗುವ ಕನಸಿನ ಖಾಲಿ ಜೋಳಿಗೆ ಹಿಡಿದು ಹೊರಟಾಗ ಅಚಾನಕ್ ಆಗಿ ಸಿಕ್ಕಿದ್ದು ನಮ್ಮ ದೃಶ್ಯ.


ಒಂದು ಮೂರು ತಿಂಗಳು ನಾಟಕ ಮಾಡಿ ಆಮೇಲೆ ಇಂಡಸ್ಟ್ರಿಗೆ ಹೋಗೋಣ ಎಂದು ಡಿಸೈಡ್ ಮಾಡಿ ದೃಶ್ಯಗೆ ಕಾಲಿಟ್ಟ ನನಗೆ ಆ ಮೂರು ತಿಂಗಳಲ್ಲಿ ಇಡೀ ನನ್ನ ವ್ಯಕ್ತಿತ್ವವನ್ನೆ ಬೆತ್ತಲಾಗಿಸಿ ಕನ್ನಡಿ ಹಿಡಿದಿತ್ತು ರಂಗಭೂಮಿ , ಆವಗ್ಲೆ ಗೊತ್ತಾಗಿದ್ದು ನಾನು ಮಾಡುತ್ತಾಯಿರುವುದು ನಾಟಕ ಅಲ್ಲ ರಂಗಭೂಮಿ ಎಂದು.


ಅಷ್ಟರಲ್ಲಿ ದೇವರುಗಳನ್ನೆ ನಂಬದ ನನಗೆ ದೇವಸ್ಥಾನದಂತೆ ಕಾಣಲು ಶುರುವಾಗಿತ್ತು ಆ ನಮ್ಮ ತಾಲಿಮು ಮಾಡುವ ಸ್ಥಳ ಹರಿಹರ ಗುಡ್ಡದ ಪುಟ್ಟ ಹಟ್. ಅಂದಿನಿಂದ ರಂಗಭೂಮಿಯನ್ನು ನೋಡುವ ನನ್ನ ದೃಷ್ಟಿಕೋನವೆ ಬದಲಾಗಿತ್ತು. ನನ್ನ ನಟನಾಗುವ ಹುಚ್ಚಿಗೆ treatment ಸಿಗಲು ಶುರುವಾಗಿತ್ತು.


ಮೊದಲು ನನ್ನನ್ನು ನನಗೆ ಪರಿಚಯಿಸಿ ನನ್ನ ಕೈಗೆ ಉಳಿಯನ್ನು ಕೊಟ್ಟು ಸುತ್ತಿಗೆ ಹಿಡಿದು ಕುಳಿತುಬಿಟ್ಟಿದ್ದರು ನಮ್ಮ ಗುರುಗಳು.

ಅಗೆದಷ್ಟು ಆಳ, ಚಲಿಸಿದಷ್ಟು ದೂರ, ಕಲಿತಷ್ಟು ಕಲಿಸುತ್ತಾ ಆ ಉಳಿಯ ಪೆಟ್ಟಿನ ನೋವಿನಲ್ಲೂ ಒಂತರ ಖುಷಿ ನೆಮ್ಮದಿ ಸಾರ್ಥಕಥೆಯ ಭಾವ ನನ್ನ ಮೂರು ತಿಂಗಳ ಯೋಜನೆಯನ್ನು ಮೂರು ವರ್ಷಕ್ಕೆ ಎಳೆದು ತಂದುಬಿಟ್ಟಿದೆ. ಇನ್ನೂ ಎಷ್ಟು ದೂರ ಎಳೆದೊಯ್ಯುವುದೋ ನೊಡಬೇಕಿದೆ. ನಾನು ಮಾಡಿದ ಒಂದೊಂದು ಪಾತ್ರವು ನನ್ನೊಳಗಿರುವ ಒಬ್ಬೊಬ್ಬ ವ್ಯಕ್ತಿಯನ್ನು ಪರಿಚಯಿಸಿ ನನ್ನನ್ನು ಒಬ್ಬ ಚಿಂತನಾ ಮನುಷ್ಯನನ್ನಾಗಿ ಮಾಡಿವೆ ಎಂಬುದು ತೃಪ್ತಿಕರ.


ಅಂದು ಸಿನಿಮಾ ಸ್ಟಾರ್ ಆಗುವ ದೊಡ್ಡ ಕಲಾವಿದನಾಗುವ ಕನಸಿನ ಖಾಲಿ ಜೋಳಿಗೆ ಹಿಡಿದು ಬಂದ ನನಗೆ ನಮ್ಮ ದೃಶ್ಯವು ಈ ಮೂರು ವರ್ಷಗಳಲ್ಲಿ ನನ್ನ ಗುರಿ ಮುಟ್ಟಲು ಬೇಕಾಗಿರುವ ಒಂದಿಷ್ಟು ಅಂತ್ರ ತಂತ್ರ ಮಂತ್ರಗಳನ್ನು ಜೊಳಿಗೆಗೆ ತುಂಬಿಸಿ ಯುದ್ದಕ್ಕೆ ಸೈನಿಕನನ್ನು ಪಳಗಿಸಿ ಕಳಿಸುವಂತೆ ಕೈಗೆ ಖಡ್ಗ ಕೊಟ್ಟು ಸೈನ್ಯದಂತೆ ಬೆನ್ನ ಹಿಂದೆ ನಿಂತಿದೆ, ಇದು ನಮ್ಮ ದೃಶ್ಯ ನನ್ನ ಹೆಮ್ಮೆ .

- ಕೌಶಿಕ್


ree

Kowshik joined Dhrushya in 2018 and has been contributing to theatre ever since. He has taken his full-time profession as an actor, voice artist and production professional.

Comments


Subscribe Form

© 2023 by Dhrushya Rangatanda. 

bottom of page