google788439879b616bdb.html
top of page

Dhrushya

Updated: Jan 6, 2019



ree

ದೃಶ್ಯ

ಸದ್ದು ಮಾಡದೆ ಕೆಲಸ ಮಾಡುವವರು ಕೆಲವರು. ಸದ್ದು ಮಾಡುತ್ತ ಕೆಲಸವನ್ನೆ ಮಾಡದವರು ಇನ್ನೂ ಕೆಲವರು. ನಮ್ಮ ದಾಕ್ಷಾಯಿಣಿ ಭಟ್‍ರವರು ಮೊದಲನೆ ಸಾಲಿಗೆ ಸೇರಿದವರು. “ದೃಶ್ಯ” ತಂಡವನ್ನು ಕಟ್ಟಿಕೊಂಡು ಹಲವಾರು ವರ್ಷಗಳಿಂದ ತಮ್ಮ ಪಾಡಿಗೆ ತಾವು ರಂಗಭೂಮಿಯ ಹಲವು ಮಜಲುಗಳನ್ನು ರಂಗಭೂಮಿಯ ಹಂಬಲವಿರುವ ಅನೇಕರಿಗೆ ಕಲಿಸುತ್ತಾ ಬಂದಿದ್ದಾರೆ. ತಾವು ನೀನಾಸಂನಲ್ಲಿ ಕಲಿತದ್ದು, ಮತ್ತು ಇತರೆ ತಂಡಗಳೊಂದಿಗೆ ಅರಿತದ್ದನ್ನ ತಮ್ಮ ತಂಡಕ್ಕೆ ಬರುವ ಹೊಸ ಕಲಿಕಾ ವಿಧ್ಯಾರ್ಥಿಗಳಿಗೆ ಧಾರೆಯೆರೆಯುತ್ತಾ ತಂಡವನ್ನು ಒಂದು ಸಶಕ್ತ ರಂಗತಂಡವಾಗಿ ರೂಪಿಸಿಕೊಂಡಿದ್ದಾರೆ. ಇವರ ತಂಡದಿಂದ ಪ್ರದರ್ಶನಗೊಂಡ ನಾಟಕಗಳು ಅನೇಕ. ಹಾಗೆ ಹಲವು ರಂಗ ತರಬೇತಿ ಕಾರ್ಯಾಗಾರಗಳನ್ನು ರೂಪಿಸಿರುವುದು ಇವರ ಹೆಗ್ಗಳಿಕೆ. ಅದರ ವಿವರಗಳನ್ನೆಲ್ಲ ಅವರ ತಂಡದ ಮಾಹಿತಿಯಲ್ಲಿ ತಿಳಿಸಿದ್ದಾರೆ. ಇದೀಗ ಸಂಪೂರ್ಣ ರಂಗ ರೆಪರ್ಟರಿಯಾಗಿ ರೂಪಿಸಲು ಶ್ರಮ ವಹಿಸುತ್ತಿದ್ದಾರೆ. ಇವರ ಆಸೆ ಆಕಾಂಕ್ಷೆಗಳೆಲ್ಲ ನೆರವೇರಿ ಕನ್ನಡ ರಂಗಭೂಮಿಗೆ ಒಂದು ಸಶಕ್ತ ರಂಗರೂಪದ ತಂಡವಾಗಿ ಕೊಡುಗೆಯಾಗಲಿ ಎಂದು ಹಾರೈಸುತ್ತೇನೆ.

ನಾಗೇಂದ್ರ ಶಾ

(ಕಲಾವಿದ - ನಿರ್ದೇಶಕ)



 
 
 

Comments


Subscribe Form

© 2023 by Dhrushya Rangatanda. 

bottom of page